ಯಶೋಗಾಧೆ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಬ್ಬನಹಳ್ಳಿ, ಮದ್ದೂರು ತಾಲ್ಲೂಕು.

 1947 ರಲ್ಲಿ ಪ್ರಾರಂಭವಾದ ಸುಮಾರು 72 ವರ್ಷಗಳ ಪೂರೈಸಿ ವಜ್ರಮಹೋತ್ಸವದ ಹೊಸಿಲಲ್ಲಿರುವ ಶಾಲೆ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಬ್ಬನಹಳ್ಳಿ ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

ಈ ಶಾಲೆ ಒಂದು ಕಾಲಕ್ಕೆ 300 ವಿದ್ಯಾರ್ಥಿಗಳನ್ನು ದಾಖಲಾತಿ ಹೊಂದಿದ್ದ, ಶಾಲೆ ಆದರೆ ಇತ್ತೀಚಿನ ವರ್ಷಗಳಲ್ಲಿ ನಾನಾ ಕಾರಣಗಳಿಂದ ಮಕ್ಕಳ ದಾಖಲಾತಿಯ ಪ್ರಾಮಾಣ ಗಣನೀಯವಾಗಿ ಕುಸಿತಕಂಡು 2016-17ನೇ ಶೈಕ್ಷಣಿಕ ಸಾಲಿನ ಹೊತ್ತಿಗೆ ಶಾಲೆಯ ದಾಖಲಾತಿ ಹತ್ತಕ್ಕಿಂತಲೂ ಕಡಿಮೆಯಾಗಿ ಶಾಲೆಯನ್ನು ಮುಚ್ಚುವ ಇಲ್ಲವೇ ಪಕ್ಕದ ಸರ್ಕಾರಿ ಶಾಲೆಗೆ ಸಂಯೋಗಗೊಳಿಸುವ ಸ್ಥಿತಿಗೆ ತಲುಪಿತ್ತು 2017-18ನೇ ಸಾಲಿನ ಪ್ರಾರಭದಲ್ಲಿ ಶಾಲೆಯ ದಾಖಲಾತಿ ಕೇವಲ 6 ವಿದ್ಯಾರ್ಥಿಗಳು ಇದ್ದು ಹಾಜರಾಗುತ್ತಿದ್ದ ಮಕ್ಕಳು 4 ಮಾತ್ರ ಈ ಹಂತದಲ್ಲಿ ಶಾಲೆಯ ದಯನೀಯ ಸ್ಥಿತಿಯ ಅರಿವು ಶಾಲಾ ಶಿಕ್ಷಕಕರಲ್ಲಿ ಹಾಗೂ S.D.M.C ಸದಸ್ಯರಲ್ಲಿ ಬರಲಾಗಿ, ಸದರಿ ವರ್ಷದಲ್ಲಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿಯನ್ನು ಹೆಚ್ಚಿಸಿ ಶಾಲೆಗೆ ಪುನರುಜ್ಜೀವನಗೊಳಿಸಲು ಸಂಕಲ್ಪ ಮಾಡಲಾಯಿತು.
2016-17 ಸಾಲಿನ ಅಂತ್ಯಕ್ಕೆ ವರ್ಗಾವಣೆಯ ಮೂಲಕ ಮತ್ತೋಬ್ಬ ಶಿಕ್ಷಕರು ಶಾಲೆಯ ಕರ್ತವ್ಯಕ್ಕೆ ಹಾಜರಾದರು. ಆಗ ಶಿಕ್ಷಕರ ಸಂಖ್ಯೆ ಇಬ್ಬರಾಗಿ S.D.M.C ಯಲ್ಲಿ ಕ್ರೀಯಾಶೀಲ ಅಧ್ಯಕ್ಷರು ಅವರೊಟ್ಟಿಗೆ ಇಬ್ಬರು ಶಿಕ್ಷಕರು ಗ್ರಾಮದಲ್ಲಿನ ಮಕ್ಕಳ ಸರ್ವೇಕ್ಷಣೆಯನ್ನು ಪ್ರಾರಂಭಮಾಡಿ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಲು ಪ್ರತಿ ಮನೆಗಳನ್ನು ಸಂದರ್ಶಿಸಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಕೋರಿಕೊಳ್ಳಲಾಯಿತು. ಮೊದಲಿಗೆ ಪೋಷಕರ ಪ್ರತಿಕ್ರಿಯೆ ತುಂಬಾ ಋಣಾತ್ಮಕ ಹಾಗೂ ತೀರಾ ನಿರಾಶಾದಾಯಕವಾಗಿತ್ತು. ಆದರು ಶಾಲೆಯ S.D.M.C ಅಧ್ಯಕ್ಷರು ತಮ್ಮ ಸ್ನೇಹಿತರು ಬಂಧುಗಳ ಮಕ್ಕಳನ್ನು ಮನವರಿಕೆ ಮಾಡಿ ಕೆಲವೊಂದಷ್ಟು ವಿದ್ಯಾರ್ಥಿಗಳು ದಾಖಲಾತಿ ಮಾಡಲಾಯಿತು. ಆಗ 6 ಇದ್ದ ದಾಖಲಾತಿ 15 ರಿಂದ 20 ರ ಅಂಚಿಕೆ ಬಂತು. ಆದರೆ ಪ್ರಯತ್ನ ಅಷ್ಟಕ್ಕೆ ನಿಲ್ಲಲಿಲ್ಲ, ಈ ಸಂಧರ್ಭದಲ್ಲಿ ಡಯಟ್‌ನ ಉಪನ್ಯಾಸಕರು ಶ್ರೀ ಸಿದ್ದರಾಜು ರವರು ನಮ್ಮ ಪ್ರಯತ್ನಗಳನ್ನು ಮುಂದುವರೆಸುವAತೆ ಪ್ರೋತ್ಸಾಹಿಸಿ ಹಾಗೆಯೇ ಇನ್ನೂ ದಾಖಲಾತಿಯ ಹೆಚ್ಚಳವನ್ನು ಮಾಡಲು ಅನೇಕ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದರು.
ಈ ರೀತಿಯ ಅನೇಕ ಪ್ರಯತ್ನಗಳ ನಡುವೆ ನಮಗೆ ಹೊಳೆದಿದ್ದು, ಹಿರಿಯ ವಿದ್ಯಾರ್ಥಿಗಳ ಸಂಘವನ್ನು ರಚಿಸಿ ಆ ಮೂಲಕ ಶಾಲೆಯ ಅಭಿವೃದ್ಧಿಗೆ ಅವರಿಂದ ಸಲಹೆ, ಸೂಚನೆ, ಸಹಕಾರ, ಮಾರ್ಗದರ್ಶನ ಪಡೆದು ಶಾಲೆಗೆ ಹೊಸರೂಪ ಕೊಡುವ ಗುರಿ ಇಟ್ಟುಕೊಳ್ಳಲಾಯಿತು. ಆನೇಕರ ಪರಿಶ್ರಮದಿಂದ “ಹಿರಿಯ ವಿದ್ಯಾರ್ಥಿಗಳ ಸಂಘವು” ರಚನೆಯಾಯಿತು. ಹಿರಿಯ ವಿದ್ಯಾರ್ಥಿ ಸಂಘದ ರಚನೆ ಶಾಲಾಭಿವೃದ್ಧಿಯ ಗುರಿಗೆ ಆನೆ ಬಲಬಂದAಥಾಗಿ ಸಾಕಷ್ಟು ಶಾಲಾ ಪುನಃಶ್ಚೇತನ ಕಾರ್ಯಗಳು, ಗ್ರಾಮಸ್ಥರನ್ನು ಶಾಲೆಯ ಕಡೆ ಸೆಳೆಯುವ, ಸರ್ಕಾರಿಶಾಲೆಯ ಮಹತ್ವ ತಿಳಿಸುವ ಜೊತೆಗೆ ಮತ್ತಷ್ಟು ದಾಖಲಾತಿಗಳು ಆದವು ಅಂದರೆ 2017-18 ಸಾಲಿಗೆ 33 ವಿದ್ಯಾರ್ಥಿಗಳು ದಾಖಲಾದರು.

 2017-18ನೇ ಸಾಲಿನಲ್ಲಿ ಹಿ.ವಿ.ಸಂ. SDMC ಹಾಗೂ ಗ್ರಾಮದ ಶಿಕ್ಷಣಾಕ್ತರ ನೆರವಿನಿಂದ ಅನೇಕ ದಾನಗಳು, ಅಭಿವೃದ್ಧಿ ಕಾರ್ಯಗಳು, ವಿನೂತನ ಕಾರ್ಯಕ್ರಮಗಳು ನಡೆದವು. ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳು 2 ಕಂಪ್ಯೂಟರ್‌ಗಳ ಮಿನಿ ಪ್ರೋಜೆಕ್ಟರ್‌ಗಳು, ಗ್ರಂಥಾಲಯಕ್ಕೆ ನೂರಾರು ಪುಸ್ತಕಗಳು, ಅನೇಕ ರೀಪೇರಿ ಕೆಲಸಗಳು, ಟೈ-ಬೆಲ್ಟ್, ಸಮವಸ್ತç, ಮಕ್ಕಳ ಮನೆ ಪ್ರಾರಂಭ ಗ್ರಾಮಸ್ಥರಿಗೆಲ್ಲಾ ಸ್ಪರ್ದೆಗಳು, ಆರೋಗ್ಯ ಶಿಬಿರ, NSS ಶಿಬಿರ ಗ್ರಾಮಸ್ಥರೊಟ್ಟಿಗೆ ಅನೇಕ ದಿನಾಚರಣೆ ಕಾರ್ಯಕ್ರಮಗಳು, ಶಾಲಾವಾರ್ಷಿಕೋತ್ಸವ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 2000ರೂ ಠೇವಣಿ ನಡೆದು ಗ್ರಾಮದ ಸುತ್ತಲಿನ ಶಾಲೆಗಳ ಅಷ್ಟೇಅಲ್ಲದೇ ತಾಲ್ಲೂಕಿನಲ್ಲಿ ಗಮನ ಸೆಳೆದೆ ಶಾಲೆಯಾಯಿತು.

ಇವೆಲ್ಲದರ ಪರಿಣಾಮ 2018-19ನೆ ಸಾಲಿನಲ್ಲಿ ದಾಖಲಾತಿಯ ಪ್ರಾಮಾಣ 1 ರಿಂದ 7ನೇ ತರಗತಿಯಲ್ಲಿ 61 ವಿದ್ಯಾರ್ಥಿಗಳು ಮಕ್ಕಳ ಮನೆಯಲ್ಲಿ 25 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಜಿಲ್ಲೆಯ, ತಾಲ್ಲೂಕಿನ ಗಮನವನ್ನು ಸೆಳೆದ ಶಾಲೆಯಾಗಿದೆ.
ಮುಂದಿನ ಅಂದರೆ 2019-2020 ಸಾಲಿಗೆ ಅನೇಕ ಯೋಜನೆಗಳನ್ನು ಕೈಗೊಂಡಿದ್ದು, ಪ್ರಾರಂಭಕ್ಕೆ 2ನೇ ವರ್ಷದ ಬೇಸಿಗೆ ಶಿಬಿರ ಆಯೋಜನೆಯನ್ನು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ತರಗತಿಗಳನ್ನು SMART ಕ್ಲಾಸ್‌ಗಳಾಗಿ ಪರಿವರ್ತಿಸುವ, ಭಾಷ ಪ್ರಯೋಗಾಲಯವನ್ನು ಸ್ಥಾಪಿಸಿ ಮಕ್ಕಳಿಗೆ ಕಂಪ್ಯೂಟರ್ ತರಬೇತಿ, ಗ್ರ‍್ರಂಥಾಲಯ ಬಳಕೆಯ ಅಭಿವೃದ್ಧಿ, ಶಾಲಾ ವಾತವರಣ ಆಕರ್ಷಣೆಗೊಳಿಸಿ ಮಾದರಿ ಶಾಲೆಯಾಗಿ ಮಾಡಿ ದಾಖಲಾಗುವ ಎಲ್ಲಾ ಮಕ್ಕಳಿಗೆ ನೀಡುವ ಪಠ್ಯ ಹಾಗೂ ಸಹಪಠ್ಯಗಳಲ್ಲಿ ಗುಣಾತ್ಮಕ ಕಲಿಕೆಯನ್ನು ನೀಡುವ ಬೃಹತ್ ಗುರಿಯೊಂದಿಗೆ ಮುನ್ನಡೆಯುತ್ತಿದೆ. ನಮ್ಮ ಈ ಸಬ್ಬನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

January 18, 2020