ನಲಿಕಲಿ ತರಬೇತಿ

ನಲಿಯುತ್ತಾ ಕಲಿಯೋಣ ಎಂಬ ಪರಿಕಲ್ಪನೆಯ ಅಡಿಯಲ್ಲಿ, ಶಾಲೆಗೆ ದಾಖಲಾಗಿದ್ದ ಮತ್ತು ಶಾಲೆ ಬಿಟ್ಟ ಎಲ್ಲಾ ತರಹದ ಮಕ್ಕಳಲ್ಲಿ ನಿರೀಕ್ಷಿತ ಪ್ರಮಾಣ ಕಲಿಕೆ ಮೂಡಿಸಲು ಹುಟ್ಟಿಕೊಟ್ಟ ಹೊಸ ಯೋಜನೆಯೇ `ನಲಿ-ಕಲಿ’
ಪದ್ಧತಿ.
ಒಂದೇ ಕೋಣೆಯಲ್ಲಿ ೧ ರಿಂದ ೩ನೇ ತರಗತಿಯವರೆಗೆ ಒಬ್ಬರೇ ಶಿಕ್ಷಕರು ನಿರ್ವಹಿಸುವ ಹಿತ ದೃಷ್ಠಿಯಿಂದ
ಮೈಲುಗಲ್ಲುಗಳು ಮತ್ತು ಮೆಟ್ಟಿಲುಗಳನ್ನು ಮಾಡಲಾಗಿದೆ. ಈ ಕಲಿಕೆಯು ಮಕ್ಕಳಿಗೆ ಸಂತಸದಾಯಕ, ಸ್ವಕಲಿಕೆಗೆ,
ಸ್ವವೇಗದ ಕಲಿಕೆಗೆ, ಚಟುವಟಿಕಾಧಾರಿತ ಕಲಿಕೆಗೆ ಪೂರಕವಾಗಿದೆ.
ರಚನಾವಾದದ ತತ್ವದ ಹಿನ್ನಲೆಯಲ್ಲಿ ನಲಿಕಲಿ, ಪದ್ಧತಿಯ ಪ್ಯಾ ರಚಸಿ, ಬೋಧನಾ ವಿಧಾನ ಸಿದ್ಧಪಡಿಸಲಾಗಿದೆ. ಈ ತರಬೇತಿ ಕಾರ್ಯಾಗಾರದಲ್ಲಿ ಗಣಿತ ವಿಷಯದ ೩೭ ಚಟುವಟಿಕೆಗಳು, ಭಾಷಕಲಿಕೆಯಲ್ಲಿ ವರ್ಣಮಾಲೆಯ
ಹಂತಗಳು, ರಗಸದ ಅ ದಿಂದ ಅಂ. ಆಃ ಓ ಜೊತೆಗೆ ಗುಣಿತಾಕ್ಷರ ಪರಿಕಲ್ಪನೆ ಮತ್ತು ಪರಿಸರ ಅವ್ಯಯನಕ್ಕೆ
ಸಂಬAಧಿಸಿದ ಸರಳ ಪ್ರಯೋಗಗಳು ಇವುಗಳು ಕುರಿತು ಸಂಪನ್ಮೂಲ ಶಿಕ್ಷಕರು ಸ-ವಿವರವಾಗಿ ಚರ್ಚಿಸಿದರೆ ಇವುಗಳ ಜೊತೆಗೆ, ಪ್ರಗತಿನೋಟ, ದಿನಚರಿ, ವೈಯಕ್ತಿಕ ಅಂಶವಹಿ ಕ್ರೋಢೀಕೃತ ಅಂಶವಹಿ ಇತ್ಯಾದಿಗಳ ಬಗ್ಗೆಯೂ
ತಿಳಿಸಿ ಕೊಟ್ಟರು.
ಒಟ್ಟಾರೆಯಾಗಿ ನಲಿ-ಕಲಿ- ಚಟುವಟಿಕೆಗಳು ಹೊರೆಯೆಂಬ ಭಾವನೆಯಿಂದ ಹೊರಬರಲು ಅನುಕೂಲವಾಯಿತು
ಮತ್ತು ಪುನರ್‌ವಿಲನ ಮಾಡಿಕೊಳ್ಳಲು ಅವಕಾಶವಾಯಿತು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.
ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಸಲಹೆ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಡ್ಯ ವತಿಯಿಂದ ದಿ|| ೦೧-೦೨-೨೦೧೯ರಂದು ಆಯೋಜಿಸಿದ್ದ “ವೃತ್ತಿಮಾರ್ಗದರ್ಶನ ಹಾಗೂ ಶೈಕ್ಷಣಿಕ ಉಪಬೋಧೆ” ಕಾರ್ಯಾಗಾರವನ್ನು ಡಯಟ್‌ನ ಪ್ರಾಂಶುಪಾಲರಾದ ಶ್ರೀಯುತ ಶಿವಮಾದಪ್ಪರವರು. ಉದ್ಘಾಟಿಸುವುದರ ಮೂಲಕ – ಪ್ರೌಢಶಾಲಾ ಹಂತದಲ್ಲಿ ವೃತ್ತಿ ಮಾರ್ಗದರ್ಶನದ ಅವಶ್ಯಕತೆ ಪ್ರಮುಖ ಎಂದು ತಮ್ಮ ಉದ್ಘಾಟನಾ ನುಡಿಯಿಂದ ಶುಭಕೋರಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರಾದ ಶ್ರೀಯುತ ಆಂಥೋನಿಪಾಲ್‌ರವರು, “ಪ್ರೌಢಶಾಲಾ ವಿದ್ಯಾರ್ಥಿಯ
ವೈಯಕ್ತಿಕ ಹಾಗೂ ಸಾಮಾಜಿಕ ಬದುಕು ಹೇಗೆ” ಎಂಬುದರ ಕುರಿತಾಗಿ ವಿವರಸಿದರು.
ನಂತರದಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಪ್ರಭುರವರು “ಆಪ್ತ ಸಲಹೆ ಮತ್ತು
ವೃತ್ತಿಮಾರ್ಗದರ್ಶನದ” ಕುರಿತು ಚರ್ಚಿಸಿದರು.

ಕೊನೆಯದಾಗಿ ಇನೋರ್ವ ಸಂಪನ್ಮೂಲ ಶಿಕ್ಷಕರಾದ ಶ್ರೀಯುತ ವಿಜಯಕುಮಾರ್‌ರವರು “ವಿದ್ಯಾರ್ಥಿ ದೆಸೆಯಲ್ಲಿ ಅವನ ವರ್ತನೆ ಹೇಗೆ” ಎಂಬುದರ ಕುರಿತು ಸವಿವರ ಮಾಹಿತಿ ನೀಡಿದರು.
ತರಬೇತಿಯ ನೋಡಲ್ ಹಾಗೂ ಡಯಟ್‌ನ ಉಪನ್ಯಾಸಕರಾದ ಶ್ರೀಮತಿ ವಿಜಯಕುಮಾರಿಯವರ
ವಂದನಾರ್ಪಣೆಗಳೊAದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ಗಣಿತ ಕಲಿಕ ಆಂದೋಲನ ತರಬೇತಿ ದಿನಾಂಕ : ೧೩-೧೨-೨೦೧೮ ರಿಂದ ೧೫-೧೨-೨೦೧೮
೨೦೧೮-೧೯ನೇ ಸಾಲಿನಲ್ಲಿ ಪ್ರಾಥಮಿಕ ೪ ಮತ್ತು ೫ನೇ ತರಗತಿಯಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ತರಬೇತಿ
ನೀಡುವ ಸಂಬAಧ ಎಂ.ಆರ್.ಪಿ.ಗಳನ್ನು ಸಿದ್ಧಪಡಿಸಲು ಮಂಡ್ಯ ಡಯಟ್‌ನಲ್ಲಿ ದಿನಾಂಕ : ೧೩-೧೨-೨೦೧೮ ರಿಂದ ೧೫-೧೨-೨೦೧೮ರವರೆಗೆ ೩ ದಿನಗಳ ಕಲ ರಾಜ್ಯಮಟ್ಟದ ಎಂ.ಆರ್.ಪಿ. ಸ-ವಿವಾಸ ತರಬೇತಿಯನ್ನು “ಗಣಿತ ಕಲಿಕ ಆಂದೋಲನ” ಶೀರ್ಷಿಕೆಯ ಅಡಿಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಾಗಾರದಲ್ಲಿ ರಾಮನಗರ – ಮೈಸೂರು – ಮಂಡ್ಯ ಜಿಲ್ಲೆಗಳಿಂದ ಒಟ್ಟು ೩೬ ಜನ ಕ್ಷೇತ್ರ
ಸಮನ್ವಯಾಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ – ಅಕ್ಷರ ಫೌಂಡೇಷನ್‌ನ
ನೋಡಲ್ ಅಧಿಕಾರಿಗಳಾದ ಶ್ರೀಯುತ – ನಾಗರಾಜು ಪ್ರಭುರವರು ನಿರ್ವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.

January 20, 2020