ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ

ಬಾಲಕ ತಿನ್ನುವ ಚಾಕ್ಲೇಟ್‌ನಿಂದ ಹಿಡಿದು ಬಾಹ್ಯಾಕಾಶದಲ್ಲಿ ಹಾರುವ ರಾಕೇಟ್ ವರೆಗೂ ಇವತ್ತು ಪ್ಲಾಸ್ಟಿಕ್
ಸರ್ವಾಂತರ್ಯಾಮಿ. ಪ್ಲಾಸ್ಟಿಕ್ ಎಂಬ ಮಹಾಮಾಯೆ ಅವಿಭಾಜ್ಯ ಹಾಗೂ ಅನಿವಾರ್ಯ ಅಂಗವಾಗಿ ನಮ್ಮ ಜೀವನದಲ್ಲಿ ಇನ್ನಿಲ್ಲದಂತೆ ಆವರಿಸಿದ್ದು, ಅದರ ನಯಮುಷ್ಟಿಯಲ್ಲಿ ನಾವೆಲ್ಲ ಸಿಕ್ಕಿಹಾಕಿಕೊಂಡಿದ್ದು, ಹೋರಬರಲಾಗದೆ ಒದ್ದಾಡುತ್ತಿದ್ದೇವೆ. ಅಗ್ಗ, ಅನುಕೂಲ, ಬಳಸಿ ಬಿಸಾಡಬಹುದು ಎಂಬಿತ್ಯಾದಿ ಕಾರಣಳಿಂದಾಗಿ ಅದು ಬಳಕೆ
ಸ್ನೇಹಿಯಾಗಿದೆ. ಆದರೆ ಅದರ ವಿಪರೀತ ಹಾಗೂ ಬೇಜಾಬ್ದಾರಿಯ ಬಳಕೆಯೇ ಈಗ ಪರಿಸರಕ್ಕೆ ಬಹುದೊಡ್ಡ ಕಂಟಕವಾಗಿ ಕಾಡುತ್ತಿದೆ. ನಾವು ಪ್ಲಾಸ್ಟಿಕ್‌ನ ಅನುಕೂಲವನ್ನಷ್ಟೇ ನೋಡಿ ಮರುಳಾಗಿ ಅದರ ದಾಸರಾಗಿಬಿಟ್ಟತದ್ದೇವೆಯೇ
ಹೊರತು ಅದು ತಂದೊಡ್ಡಿರುವ ಬಹು ದೊಡ್ಡ ಅಪಾಯದ ಕಡೆಗೆ ಗಮನ ಹರಿಸುತ್ತಿಲ್ಲೇ ಇಲ್ಲ. ಅದನ್ನು ನಿಷೇಧಿಸಿ ಎಂದು ಎಷ್ಟೇ ಕೂಗಾಡಿದರೂ, ಸಂಪೂರ್ಣವಾಗಿ ನಿಷೇಧಿಸುವ ಕ್ರಿಯೆಯಲ್ಲಿ ನಾವು ವಿಫಲವಾಗಿದ್ದರೂ ಕೂಡ ಅದನ್ನು ಪಳಗಿಸುವ ಕ್ರಿಯೆಯಲ್ಲಿ ಯಶಸ್ಸು ಕಾಣುತ್ತಿದ್ದೇವೆ.
“ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ!” ಎಂಬ ಅಣ್ಣ ವರ ಹಾಡನ್ನು “ನಾನು ಎಂದು ಕರಗಲಾರೆ, ತಿಳಿದು ತಿಳಿದು ಛಲವೇತಕೆ!” ಎಂದು ಹಾಡುತ್ತಿರುವ ಪ್ಲಾಸ್ಟಿಕ್ ಮೇಲೆ ಪ್ರತಿಸಲ ನಿಷೇಧದ ಬಾಣಬಿಟ್ಟಾಗಲೂ ರಕ್ತ ಬೀಜಾಸುರನಂತೆ ಪ್ಲಾಸ್ಟಿಕ್ ಬಳಕೆ ಹತ್ತಕ್ಕೆ ನೂರಾಗಿ, ನೂರಕ್ಕೆ ಸಾವಿರಾಗಿ ಬೆಳೆಯುತ್ತಲೇ ಇದೆ.
(ಪ್ರತಿ ವರ್ಷ ಜೂನ್ ೫ನ್ನು ವಿಶ್ವ ಪರಿಸರ ದನವಾಗಿ ಆಚರಿಸುತ್ತೇವೆ. ವಿಶ್ವಸಂಸ್ಥೆಯ ಆಶ್ರಯದಲ್ಲಿ ೧೯೭೨ರಿಂದ ಇದನ್ನು ಆಚರಿಸುತ್ತಿರುವುದರಿಂದ ಮೇಲ್ನೋಟಕ್ಕೆ ಅದೊಂದು ವಾರ್ಷಿಕ ವಿಧಿ ಎಮದು ಉದಾಸೀನ ಮಾಡುವ ಜನರಿಗೇನೂ ಕೊರತೆ ಇಲ್ಲ. ಅಥವಾ ಇದರ ಬಗ್ಗೆ ಹೆಚ್ಚಿನ ಅರಿವು ಇಲ್ಲದೆ ಈ ದಿನವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದಿರುವ ಜನರೂ ಇದ್ದಾರೆ. ಹಾಗೆಯೇ ಇದೊಂದು ದಿನಾ ಕಾರ್ಯಕ್ರಮ ಮಾಡಿದರೆ
ಪರಿಸರ ಮಾಲಿನ್ಯ ನಿಂತುಹೋಗುವುದೇ ಎಂದೋ ಅಥವಾ ನಾನೊಬ್ಬನೇ ಪರಿಸರದ ಬಗೆಗೆ ಗಮನ ಹರಿಸಿದರೆ ಏನು ಸಾಧಿಸಲು ಸಾಧ್ಯ ಎಂಬ ಕೈಲಾಗದ ಶೂರರೂ ಉಂಟು)
ಈ ಸಲದ ವಿಶ್ವ ಪರಿಸರದ ದಿನದ ವಿಶ್ವಸಂಸ್ಥೆಯ ಘೋಷವಾಕ್ಯ (ಃಇಂಖಿ PಐಂSಖಿIಅ PಔಐಐUಖಿIಔಓ) “ಪ್ಲಾಸ್ಟಿಕ್
ಮಾಲಿನ್ಯ ತೊಡೆದುಹಾಕಿ/ಸೋಲಿಸಿ” ಅಂತ. ಇನ್ನೊಂದು ವಿಶೇಷವೆಂದರೆ ಇದರ ಜಾಗತಿಕ ಆತಿಥ್ಯ ವಹಿಸಿರುವುದು
ನಮ್ಮ ಭಾರತ. ಇದು ಹೆಮ್ಮೆ ಮತ್ತು ಜವಾಬ್ದಾರಿಯ ವಿಷಯ. ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆ ಭಾವಿ
ಪ್ರಜೆಗಳಾದ ವಿದ್ಯಾರ್ಥಿಗಳ ಪಾತ್ರ ದೊಡ್ಡದು.
(ಪ್ಲಾಸ್ಟಿಕ್‌ನಲ್ಲಿ ಮುಖ್ಯವಾಗಿ ೨ ವಿಧ. ೧. ಇಂಜಿನೀಯರಿAಗ್, ೨. ಕಮಾಡಿಟಿ (ಪದಾರ್ಥ) ಪ್ಲಾಸ್ಟಿಕ್. ಇಂಜಿನೀಯರಿAಗ್
ಪ್ಲಾಸ್ಟಿಕ್ ಅತ್ಯುನ್ನತ ಗುಣಮಟ್ಟದ್ದು (ವಿಮಾನ, ಎಲೆಕ್ಟಾçನಿಕ್ ಉಪಕರಣಗಳಲ್ಲಿ ಬಳಕೆಯಾಗುತ್ತದೆ.) ಪದಾರ್ಥ

ಪ್ಲಾಸ್ಟಿಕ್‌ನಲ್ಲಿ ಸಿಕ್ಕಾಪಟ್ಟೆ ವಿಧಗಳಿದ್ದು, ಕಡಿಮೆ ಮೈಕ್ರಾನ್ ನಕಳಪೆ ಬ್ಯಾಗ್‌ನಿಂದ ಹಿಡಿದು ಗುಣಮಟ್ಟದ ಪಾಲಿಮರ್
ಸರಕಿನವರೆಗೆ ಎಲ್ಲವೂ ಸೇರಿವೆ. ಅತ್ಯಧಿಕ ಪ್ರಮಾಣದ ಪ್ಲಾಸ್ಟಿಕ್ ಬಳಕೆಮಾಡುತ್ತಿರುವ ಕ್ಷೇತ್ರಗಳಲ್ಲಿ ಪ್ಯಾಕೆಂಜಿಗ್
ವಲಯಕ್ಕೆ ಅಗ್ರಸ್ಥಾನ) ಪ್ಲಾಸ್ಟಿಕ್ ಕುರಿತ ಕೆಲವು ಅಂಕಿ ಅಂಶಗಳತ್ತ ನೋಡ ಹರಿಸಿದರೆ ಗಾಬರಿಯಾಗುವುದು
ಮಾತ್ರವಲ್ಲ ನಾವು ಇನ್ನೂ ಏಕೆ ಪ್ಲಾಸ್ಟಿಕ್ ಬಳಸುತ್ತಿದ್ದೇವೆ ಎಂಬ ಭಾವನೆ ಬರದೆ ಇರದು. ೨೦೧೭ ಅಂದರೆ ಕಳೆದ
ವರ್ಷ ೮.೩ ಶತಕೋಟಿ ಟನ್ ನಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗಿದ್ದು ಈ ಪೈಕಿ ಶೇ. ೯ರಷ್ಟು ಮಾತ್ರ ಮರು ಬಳಕೆ ಆಗಿದೆ. ಹಾಗಾದರೆ ಉಳಿದದ್ದು ಎಲ್ಲಿ ಹೋಗುತ್ತದೆ? ಸಣ್ಣ ಸಣ್ಣ ಕ್ಯಾರಿ ಬ್ಯಾಗುಗಳು ಜಾನುವಾರುಗಳ ಹೊಟ್‌ಎ
ಸೇರುತ್ತವೆ. ಕೊಳಚೆ ರೂಪದಲ್ಲಿ ಹಾಗೂ ಬೀಚ್ ನಲ್ಲಿ ಬಿಸಾಡಲಾದ ಪ್ಲಾಸ್ಟಿಕ್ ತ್ಯಾಜ್ಯವು ಶತಮಾನದಲ್ಲಿ ಉತ್ಪಾದಿಸಿದ್ದಕ್ಕಿಂತಲೂ ಅಧಿಕ. ಒಂದು ಅಂದಾಜಿನ ಪ್ರಕಾರ, ೨೦೦೫ರ ವೇಳೆಗೆ ಸಮುದ್ರದಲ್ಲಿ ಮೀನುಗಳಿಗಿಂತ
ಹೆಚ್ಚು ಪ್ಲಾಸ್ಟಿಕ್ ತಿಂಬಿರುತ್ತದೆಯAತೆ.
ಪ್ಲಾಸ್ಟಿಕ್ ನಿಂದಾಗುವ ಹಾನಿ, ಇದು.
೧ ಮಣ್ಣನಲ್ಲಿ ಎಂದಿಗೂ ಕೊಳೆಯುವುದಿಲ್ಲ
೨ ಜೈವಿಕವಿಘಟಕವಲ್ಲ
೩ ಪ್ಲಾಸ್ಟಿಕ್ ಸುಟ್ಟಾಗ ಕ್ಯಾನ್ಸರ್‌ಗೆ ಕಾರಣವಾಗುವ ಫ್ಯೂರಾನ್ಸ್ ಡೈಆಕ್ಸಿನ್ ವಿಷಕಾರಿ ಅನಿಲ ಬಿಡುಗಡೆ
೪ ಮಳೆಗಾಲದಲ್ಲಿ ಘನತ್ಯಾಜ್ಯದಿಂದ ನೀರಿನ ಸರಾಗ ಹರಿವಿಗೆ ಅಡ್ಡಿ.
೫ ನದಿ.ಕೆರೆ, ಸಮುದ್ರ ಸೇರಿ ಜಲ ಮಾಲಿನ್ಯ ಉಂಟುಮಾಡುತ್ತದೆ.
೬ ಕಸದ ಜೊತೆ ಪ್ಲಾಸ್ಟಿಕ್ ಸೇವಿಸುವ ಪಶುಪಕ್ಷಿಗಳ ಪ್ರಾಣಕ್ಕೆ ಕಂಟಕ.
೭ ಗಾಳಿ, ನೀರು ಮತ್ತು ಮಣ್ಣಿನಲ್ಲಿ ಸೇರಿವಿಷಕಾರಿ ಅಂಶಗಳನ್ನು ಹೆಚ್ಚಿಸುತ್ತವೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ
ಪ್ರತಿ ಸಮಸ್ಯೆಗೂ ಮೂಲ ಕಾರಣ ಅಜ್ಞಾನ ಅದಕ್ಕೆ ಪರಿಹಾರ ಜ್ಞಾನ. ಈ ಜ್ಞಾನದ ಪರಿಜ್ಞಾನವಿಲ್ಲದವರಿಗೆ
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವ ಕೆಲಸ ವಿದ್ಯಾರ್ಥಿಗಳಿಗಿಂತ ಪರಿಣಾಮಕಾರಿಯಾಗಿ
ಬೇರೆಯಾರಿಂದಲೂ ಸಾಧ್ಯವಿಲ್ಲ.
೧ ಶಾಲೆಗಳಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಿಸಲು ಮತ್ತು ಪ್ಲಾಸ್ಟಿಕ್‌ನ ಅಪಾಯದ ಕುರಿತು ಜಾಗೃತಿ ಮೂಡಿಸಲು ‘ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಸಮಿತಿ’ ರಚಿಸಬೇಕು. ಇದರಡಿಯಲ್ಲಿ
ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು ಹಾಗೂ ಅದಕ್ಕೆ ಪರಿಹಾರಗಳ ಕುರಿತು ಜಾಗೃತಿ ಮೂಡಿಸಲು ಜಾಥಾ, ಶ್ರಮದಾನ,
ಪ್ರದರ್ಶನ, ಪ್ರಬಂಧ ಸ್ಪರ್ಧೆ, ಭಾಷಣ, ಚರ್ಚೆ, ಸಂಗೀತ, ನೃತ್ಯ, ನಾಟಕ, ಬೀದಿ ನಾಟಕ, ರಸ ಪ್ರಶ್ನೆ ಕಾರ್ಯಕ್ರಮಗಳನ್ನು ಏರ್ಪಡಿಸುವುದ.

೨ ವಿದ್ಯಾರ್ಥಿಗಳು ಸ್ವತ: ತಾವು, ತಮ್ಮ ಶಾಲೆ, ಮನೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ೩ಖÀ ಸೂತ್ರವನ್ನು ಅನುಸರಿಸಲು ಜಾಗೃತಿ ಮೂಡಿಸಬೇಕು.
ಖ-೧ ಖeಜuಛಿe (ಮಿತ ಬಳಕೆ) ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವುದು
ಖ-೨ ಖeuse (ಮರು ಬಳಕೆ)
ಖ-೩ ಖeಛಿಥಿಛಿಟe (ಮರು ಸೃಷ್ಟಿ)
೩. ವಿಂಗಡಿಸುವುದು ಗಾಜು, ಕಾಗದ, ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ಎಂದು ತ್ಯಾಜ್ಯವನ್ನು ವಿಂಗಡಿಸಲು
ಪ್ರತ್ಯೇಕ ಡಬ್ಬಗಳನ್ನಿರಿಸುವುದು.
೪. ಪ್ಲಾಸ್ಟಿಕ್‌ಗೆ ಪರ್ಯಾಯಗಳನ್ನು ಬಳಸುವುದ.
ಉದಾ: ಬಟ್ಟೆ ಚೀಲ, ಸ್ಟೀಲ್ ಟಿಫನ್ ಬಾಕ್ಸ್, ಸ್ಟೀಲ್ ಚಮಚ
೫. ಗೋವಾದ ಪಣಜಿ ಶಾಲೆಗಳಲ್ಲಿ ಮಕ್ಕಳಿಂದ ಪ್ಲಾಸ್ಟಿಕ್ ಸಂಗ್ರಹಿಸಿ ಹಣನೀಡಲಾಗುತ್ತದೆ. ಅದರಂತೆ ನಾವು ಅನುಸರಿಸಬಹುದು.
೬. ಸರ್ಕಾರಕ್ಕೆ ಒತ್ತಾಯ
ಉತ್ಪಾದನೆಯ ಹಂತದಲ್ಲೇ ಇದನ್ನು ಮರು ಬಳಸುವ ರೀತಿಯಲ್ಲಿ ವಿನ್ಯಾಸಗೊಳಿಸಲು,
ವಿಂಗಡಿಸುವುದಕ್ಕೆ ಹಾಗೂ ಮರುಬಳಸುವುದಕ್ಕೆ ಅವಕಾಶವಿರುವ ರೀತಿಯಲ್ಲಿ ಅದನ್ನು ತಯಾರಿಸಲು
Use & ಣhಡಿoತಿ ಅಂತಹ ಮರುಬಳಸಲಾಗದಂತಹ ಪ್ಲಾಸ್ಟಿಕ್‌ಗಳನ್ನು ನಿಷೇಧಿಸಲು ರಸ್ತೆ ನಿರ್ಮಾಣದಲ್ಲಿ ಬಳಸುವಂತೆ ಸರ್ಕಾರಕ್ಕೆ ಸಂಘಟನೆ ಮೂಲಕ ಒತ್ತಾಯಿಸುವುದು.
೭. ಸ್ವತ: ಎಲ್ಲ ವಿದ್ಯಾರ್ಥಿಗಳು ತಮ್ಮ ಮನೆ, ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಆಗಾಗ ಶುಚಿಗೊಳಿಸಿ
ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿಸಿ ಇತರರಿಗೆ ಮಾದರಿಯಾಗಬೇಕು.
೮. ಹಳ್ಳಿಗಳಲ್ಲಿ ವಾಸವಿರುವ ಅನಕ್ಷರಸ್ಥ ಜನರಿಗೆ ಮಾನವ ಸಹಿತ ಪಶು ಪಕ್ಷಿಗಳಿಗೆ ಪ್ಲಾಸ್ಟಿಕ್‌ನಿಂದಾಗುವ
ಹಾನಿಯನ್ನು ತಿಳಿಸಬೇಕು.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಒಂದು ಜಾಗತಿಕ ಸವಾಲಾಗಿದ್ದು, ಇದನ್ನು ಕೇವಲ ಕಾಯ್ದೆ ಕಾನೂನಿನ ಮೂಲಕ
ಹೋಗಲಾಡಿಸಲುಸಾಧ್ಯ. ಕೇವಲ ಸಾಮೂಹಿಕ ಜಾಗೃತಿ, ಪ್ರಾಮಾಣಿಕ, ಜವಾಬ್ದಾರಿಯುತ ಪ್ರಯತ್ನದಿಂದ ಮಾತ್ರ
ಸಾಧ್ಯ ಹಾಗಾಗಿ ಪ್ಲಾಸ್ಟಿಕ್‌ನ್ನು ತ್ಯಜಿಸಿ ಭೂಮಂಡಲವನ್ನು ಉಳಸಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸುವುದು
ನಮ್ಮೆಲ್ಲರ ಹೊಣೆಯಾಗಿದೆ.

January 20, 2020