ಸವಿ ಮಂಡ್ಯ

ಸವಿ ಸವಿ ಮಂಡ್ಯ ಇದರ ಸವಿ ಕರ್ನಾಟಕದ ಎಲ್ಲಾ ಕಡೆ ಪ್ರಸರಿಸುತ್ತಿವೆ.
ದೀಪವನ್ನು
ಹಚ್ಚುವ, ಮಕ್ಕಳ
ಬೌದ್ಧಿಕ, ಶಾರೀರಕ, ಮಾನಸಿಕ
ಬೆಳವಣಿಗೆಯ ಬುಗ್ಗೆಯಾಗಿದೆ.

ಶಿಕ್ಷಕರ ಮಾರ್ಗೋಪಾಯಗಳಿಗೆ
ಅಕ್ಷರ ದೀಪವಾಗಿದೆ.
ಶಾಲೆಯ ಅಂಗಳದಲ್ಲಿ
ಸAತೋಷದ ಕಲಿಕೆಯ
ಅಂಶಗಳನ್ನು ಪ್ರತಿ ತಿಂಗಳು
ಬತ್ತಿ ತರುವ ಸವಿಜ್ಞಾನವಾಗಿದೆ.

ವಿದ್ಯಾರ್ಥಿಗಳ ಸಾಧನೆಗಳನ್ನು
ನಕ್ಷತ್ರಗಳ ರೂಪದಲ್ಲಿ
ಹೊಳೆಯುವ ತಾರೆಗಳ ಗುಂಪಾಗಿದೆ.

ಶಿಕ್ಷಕರ ಬುನಾದಿಗೆ
ಪ್ರೇರಣೆಯಾಗಿದೆ ಈ ಸವಿಮಂಡ್ಯ ಕಬ್ಬಿನ ಜಿಲ್ಲೆಯ ಸವಿ ಮಂಡ್ಯ
ಬೆಲ್ಲದ ಸಿಹಿಯಾಗಿದೆ ಸವಿ ಮಂಡ್ಯ ರೈತರ ಜೀವನಕ್ಕೆ ಸವಿಯಾಗಲಿದೆ
ಸವಿ ಮಂಡ್ಯ.

ಕಾವೇರಿಯ ಹರಿಯುವಿಕೆ
ರ‍್ಯಾರ ರಾಜ್ಯಗಳಿಗೆ
ಸವಿ ನೀರಿನ ಮಂಡ್ಯ ಕನ್ನಂಬಾಡಿ ತೀರದ
ಹಸಿರು ತುಂಬಿರುವ
ಪ್ರಕೃತಿ ಸೌಂದರ್ಯ ದೇವತೆಯ
ಸವಿ ಮಂಡ್ಯ

ಡಯಟ್ ತರಬೇತಿಗಳ
ಸವಿ…. ಸವಿ
ಜ್ಞಾನಿಗಳ ಆಶ್ರಯದ ತಾಣವಾಗಿದೆ.
ಸವಿ ಮಂಡ್ಯ.

ಡಯಟ್ ಉಪನ್ಯಾಸಕರ ಕ್ರಿಯಾಶೀಲ ರೂಪವಾಗಿ ಅರಳುವ ಕಮಲದ
ಹೂವಿನಂತೆ, ಗುಲಾಬಿನ
ಹೂವಿನಂತೆ ಕಂಗೊಳಿಸುವ
ಮಲ್ಲಿಗೆ ಹೂವಿನ ಪರಿಮಳದಂತೆ ಡಯಟ್‌ನ ಯಜಮಾನ
ಸವಿ ಪ್ರೀತಿಯಿಂದ ತುಂಬಿರುವ ಈ ಸವಿ ಮಂಡ್ಯ……..
ಯಾವಾಗಲೂ…… ಸದಾ….;.
ಸವಿ…. ಸವಿ….. ಸವಿ……
ಮಂಡ್ಯ.

ಸುಮಿತ್ರ ಟಿ.ಕೆ. ಸ.ಹಿ.ಪ್ರಾ.ಶಾಲೆ.
ಟಿ.ಜಿ. ದೊಡ್ಡಿ, ಕೊಳ್ಳೇಗಾಲ
ಮೊ : ೬೩೬೧೫೪೨೦೦೮

 

January 20, 2020